ನಲಿಕಲಿ ಕನ್ನಡ ಹಾಗೂ ಗಣಿತ ಯೂಟ್ಯೂಬ್ ಹಾಡುಗಳನ್ನು ನೋಡಿ

Friday, 14 August 2020

ಆಶಯ ನುಡಿ

ಆತ್ಮೀಯ ವೃತ್ತಿ ಬಾಂಧವರೇ 
             ಮಕ್ಕಳಿಗೆ ಹಲವು ವಿನೂತನ ಮಾರ್ಗಗಳನ್ನು ಬೋಧಿಸುತ್ತಿರುವ ನನಗೆ ಹಾಗೂ ಶಿಕ್ಷಕ ವೃಂದಕ್ಕೆ ಉಪಯುಕ್ತ ವಾಗುವಂತಹ  ಕೆಲಸಗಳನ್ನು  ಮಾಡಬೇಕೆಂಬುದು ನನ್ನ ಪ್ರಮುಖ 
ಉದ್ದೇಶವಾಗಿದ್ದು, ಇದೇ ಉದ್ದೇಶದಿಂದ ಈ ಬ್ಲಾಗನ್ನು ಆರಂಭಿಸಿದ್ದೇನೆ.
ಇದನ್ನು ರಚಿಸಲು ತಾಂತ್ರಿಕ ಸಲಹೆಗಾರರು ಹಾಗೂ ಮಾರ್ಗದರ್ಶನ ನೀಡಿದ ನನ್ನ ಮಿತ್ರರಾದ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಶಿಕ್ಷಕರಾದ ಶ್ರೀ ಶ್ರೀನಿವಾಸ  ರವರಿಗೆ ಕೃತಜ್ಞತೆಗಳನ್ನು ಅರ್ಪಸುತ್ತೇನೆ.ಹಾಗಿಯೇ ನನ್ನನ್ನು ಹುರುದುಂಬಿಸಿ ಪ್ರೋತ್ಸಾಹಿಸಿದ
  ಕವಿತಾ ಹೆಚ್ ಹಾಗೂ ನನ್ನ  ಗುರುಗಳಾದ  ಪದ್ಮಾವತಿ ಕೆ ಮುಖ್ಯೋಪಾಧ್ಯಾಯರು ಮಾರ್ಜೇನಹಳ್ಳಿ 
 ಹಾಗೂ ಕೆ.ಜಿ.ಎಫ್ ಕ್ಷೇತ್ರಶಿಕ್ಷಣಾದಿಕಾರಿಗಳಾದ ಶ್ರೀಯುತ  ಚಂದ್ರಶೇಖರ್ ಎಸ್ ಸಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶಂಕರ್ ಕಾವಲಿ,ನನ್ನ ಹಿತೈಷಿಗಳಾದ ವಿಜಿಕುಮಾರ್  ಕ್ಷೇತ್ರ ಸಮನ್ವಯ ಅಧಿಕಾರಿಗಳು ಮಾಲೂರು ಹಾಗೂ ಸಿ.ಆರ್.ಪಿ ಗಳಾದ ಶ್ರೀಯುತ ರಾಮಚಂದ್ರ ಬಿ ವಿ ಹಾಗೂ ಬಿ.ಆರ್.ಪಿ ಗಳಾದ ನಾರಾಯಣಸ್ವಾಮಿ 
 ಎಂ ಎಸ್ ಹಾಗೂ ನನ್ನ  ಸಹೋದ್ಯೋಗಿಗಳಿಗೂ ಕೃತಜ್ಞತೆಗಳನ್ನು ಅರ್ಪಸುತ್ತೇನೆ.
      
                                               ಇಂತಿ 
                                           ಸಿಬ್ಬಂದಿ ವರ್ಗ  
                                             ಚಳಗಾನಹಳ್ಳಿ

No comments:

Post a Comment